Breaking News
Home / Reviews / ಹೆಸರಿಗಷ್ಟೇ ‘ಬದ್ಮಾಶ್‌’… He is good mass ಬದ್ಮಾಶ್ !

ಹೆಸರಿಗಷ್ಟೇ ‘ಬದ್ಮಾಶ್‌’… He is good mass ಬದ್ಮಾಶ್ !

ಹೆಸರೇ ಹೇಳುವಂತೆ ಇದು ವಿಜಯ್ ಅಲಿಯಾಸ್ ಬದ್ಮಾಶ್ (ಧನಂಜಯ್) ಸುತ್ತ ಸುತ್ತುವ ಚಿತ್ರ. ಆರ್.ಕೆ (ಪ್ರಕಾಶ್ ಬೆಳವಾಡಿ) ಎಂಬ ಲಿಕ್ಕರ್ ದೊರೆಗೆ ಕೆಲಸ ಮಾಡುವ ವಿಜಯ್, ಆಕಸ್ಮಿಕವಾಗಿ ಪ್ರಿಯಾ (ಸಂಚಿತಾ ಶೆಟ್ಟಿ) ಎಂಬ ಹುಡುಗಿಯನ್ನು ನೋಡಿ ಆಕರ್ಷಿತನಾಗುತ್ತಾನೆ. ಇನ್ನೇನು ಅವರಿಬ್ಬರೂ ಫ್ರೆಂಡ್ಸ್ ಆಗಿ ಮದುವೆ ಆಗಬೇಕು ಎನ್ನುವಷ್ಟರಲ್ಲಿ, ರಾಜ್ಯದ ಗೃಹ ಮಂತ್ರಿ ಕಿಂಗ್ (ಅಚ್ಯುತ್ ಕುಮಾರ್), ಆಕೆಯನ್ನು ಮದುವೆಯಾಗುವುದಕ್ಕೆ ಮುಂದಾಗುತ್ತಾನೆ.

Badmash Mass

ಒಂದು ನಿರ್ಧಿಷ್ಟ ಗೋತ್ರ ಮತ್ತು ನಕ್ಷತ್ರದ ಹುಡುಗಿಯನ್ನು ಕಿಂಗ್ ಮದುವೆಯಾದರೆ, ಆತ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ ಎಂದು ಒಬ್ಬ ಜ್ಯೋತಿಷಿ ಭವಿಷ್ಯ ನುಡಿದ ಕಾರಣ ಕಿಂಗ್, ಮದುವೆಯಾಗುವುದಕ್ಕೆ ತೀರ್ಮಾನಿಸುತ್ತಾನೆ. ಇದನ್ನು ತಪ್ಪಿಸುವುದಕ್ಕೆ ಹೋಗುವ ವಿಜಯ್‍ಗೆ, ಕಿಂಗ್ ಹಲವು ತಂತ್ರಗಳನ್ನು ರೂಪಿಸುತ್ತಾನೆ. ಆ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ವಿಜಯ್, ಈ ಆಟದಲ್ಲಿ ಹೇಗೆ ಗೆಲ್ಲುತ್ತಾನೆ ಎಂಬುದೇ ಚಿತ್ರದ ಕಥೆ.

`ಬದ್ಮಾಶ್’ ಕಥೆಯಲ್ಲಿ ವಿಶೇಷವಿಲ್ಲದಿದ್ದರೂ ಚಿತ್ರಕಥೆಯಲ್ಲಿ ಒಂದಿಷ್ಟು ವಿಶೇಷತೆಯಿದೆ. ಪ್ರಮುಖವಾಗಿ ಚಿತ್ರದಲ್ಲಿ ಒಂದು ಮೈಂಡ್ ಗೇಮ್ ಇದೆ. ಕಿಂಗ್ ಮತ್ತು ವಿಜಯ್ ನಡುವಿನ ಜಿದ್ದಾಜಿದ್ದಿ ಚಿತ್ರದ ನಿಜವಾದ ಹೈಲೈಟ್. ಆದರೆ, ಅದನ್ನು ನೋಡುವುದಕ್ಕೆ ತುಂಬಾ ತಾಳ್ಮೆ ಬೇಕು. ಏಕೆಂದರೆ, ಚಿತ್ರದ ಮೊದಲಾರ್ಧ ಪೂರಾ ಓತ್ಲ. ಮೊದಲಾರ್ಧದ ಪೂರಾ ಎಲ್ಲರ ಪರಿಚಯ ಮಾಡಿಕೊಡುವುದರಲ್ಲೇ ಕಳೆಯುವ ನಿರ್ದೇಶಕ ಆಕಾಶ್, ಸೆಕೆಂಡ್ ಹಾಫ್‍ನಲ್ಲಿ ಚಿತ್ರವೊಂದನ್ನು ಟ್ರಾಕ್‍ಗೆ ತರುತ್ತಾರೆ. ಅದರಲ್ಲೂ ಕೊನೆಯ ಕೆಲವು ನಿಮಿಷಗಳನ್ನು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ.

Badmash

ಆದರೆ, ಅಷ್ಟರಲ್ಲಿ ಪ್ರೇಕ್ಷಕ ಫುಲ್ ಸುಸ್ತಾಗಿರುತ್ತಾನೆ. ಅದಕ್ಕೆ ಕಾರಣ ಒಂದರ ಹಿಂದೊಂದು ಬರುವ ಹಾಡುಗಳು, ಎಷ್ಟು ಹೊಡೆದರೂ ಮುಗಿಯದ ಫೈಟುಗಳು, ಕೆಲಸಕ್ಕೆ ಬಾರದ ಕಾಮಿಡಿ ದೃಶ್ಯಗಳು ಇವೆಲ್ಲದರಿಂದ ಪ್ರೇಕ್ಷಕ ಸುಸ್ತಾಗಿಬಿಟ್ಟಿರುತ್ತಾನೆ. ಹಾಗಾಗಿ ಚಿತ್ರದಲ್ಲಿ ಏನೇ ಮೈಂಡ್ ಗೇಮ್ ಇದ್ದರೂ, ಅದೆಷ್ಟೇ ಸ್ವಾರಸ್ಯಕರವಾಗಿ ಚಿತ್ರಿಸಲಾಗಿದ್ದರೂ ಒಟ್ಟಾರೆ ಚಿತ್ರ ಆರ್ಡಿನರಿ ಎಂಬ ಲೆವೆಲ್‍ಗೆ ಬಂದು ನಿಲ್ಲುತ್ತದೆ.

ಮೊದಲೇ ಹೇಳಿದಂತೆ ಈ ಚಿತ್ರದ ಮೂಲಕ ಧನಂಜಯ್ ಸೂಪರ್ ಹೀರೋ ಆಗಿದ್ದಾರೆ. ಅದೆಷ್ಟೇ ಜನರು ಬಂದರೂ ಹೊಡೆಯುವ, ಅದೆಷ್ಟೇ ಹೊಡೆತ ತಿಂದರೂ ಎದ್ದು ನಿಲ್ಲುವ ಮಾಸ್ ಹೀರೋ ಆಗಿ ಅವರು ಗಮನಸೆಳೆಯುತ್ತಾರೆ. ಆದರೆ, ಒಂದು ಸಮಸ್ಯೆಯೆಂದರೆ, ಅವರ ಬಿಲ್ಡಪ್‍ಗೆ ಅವರ ಧ್ವನಿ ಸೂಟ್ ಆಗುವುದಿಲ್ಲ. ಇನ್ನು ಸಂಚಿತಾ ಶೆಟ್ಟಿಗೆ ಇದು ಕನ್ನಡದಲ್ಲಿ ನಾಯಕಿಯಾಗಿ ಮೊದಲ ಚಿತ್ರ. ಸಂಚಿತಾಗೆ ಹೆಚ್ಚು ಕೆಲಸವಿಲ್ಲ. ಬರೀ ಸಂಚಿತಾ ಅಷ್ಟೇ ಅಲ್ಲ, ಹೆಚ್ಚು ಕೆಲಸವಿಲ್ಲದ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.

badmash

ಸುಚೇಂದ್ರ ಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್ ಎಲ್ಲರೂ ತೆರೆಯ ಮೇಲೆ ಇರುತ್ತಾರೆಯೇ ಹೊರತು, ಅವರಿಂದ ಹೆಚ್ಚೇನೂ ನಿರೀಕ್ಷಿಸುವುದು ಕಷ್ಟ. ಎಲ್ಲರನ್ನೂ ನುಂಗಿ ಆಪೋಶನ ತೆಗೆದುಕೊಳ್ಳುವುದು ಅಚ್ಯುತ್ ಕುಮಾರ್. ನಯವಾಗಿ ಮಾತನಾಡುತ್ತಾ, ಕತ್ತು ಕುಯ್ಯುವ ಪಾತ್ರದಲ್ಲಿ ಅಚ್ಯುತ್ ಅಭಿನಯ ಸೂಪರ್. ಇನ್ನು ಶ್ರೀಷ ಛಾಯಾಗ್ರಹಣ ಸಖತ್ತಾಗಿದೆ. ಹಾಡುಗಳಲ್ಲಿ, ಫೈಟುಗಳಲ್ಲಿ ಅವರ ಕೆಲಸ ಎದ್ದು ಕಾಣುತ್ತದೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಒಂದು ಟೈಟಲ್ ಸಾಂಗ್ ಮತ್ತು ಒಂದು ಡ್ಯುಯಟ್ ಕೇಳುವಂತಿದೆ.

`ಬದ್ಮಾಶ್’ ಚಿತ್ರದ ಒಂದು ದೊಡ್ಡ ಪ್ಲಸ್ ಎಂದರೆ, ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಸಿಕ್ಕಿರುವುದು. ಮಿಕ್ಕಂತೆ ಚಿತ್ರ ಬರೀ ಓತ್ಲಾ, ಓತ್ಲಾ, ಓತ್ಲಾ.

Source : Kannada.eenaduindia.com
ಇದುವರೆಗೂ ಕೆಲ ಚಿತ್ರಗಳಲ್ಲಿ ಹೀರೋ ಆಗಿದ್ದ ಧನಂಜಯ್, ಪಕ್ಕಾ ಮಾಸ್ ಇಮೇಜ್‍ನಲ್ಲಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಈಗ `ಬದ್ಮಾಶ್' ಚಿತ್ರದ ಮೂಲಕ ಧನಂಜಯ್ ಮೊದಲ ಬಾರಿಗೆ ಪಕ್ಕಾ ಮಾಸ್ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಚಿತ್ರ ನೋಡೋಕೆ ಅದೊಂದೇ ಕಾರಣ ಎಂದರೆ ತಪ್ಪಿಲ್ಲ. ಹೆಸರೇ ಹೇಳುವಂತೆ ಇದು ವಿಜಯ್ ಅಲಿಯಾಸ್ ಬದ್ಮಾಶ್ (ಧನಂಜಯ್) ಸುತ್ತ ಸುತ್ತುವ ಚಿತ್ರ. ಆರ್.ಕೆ (ಪ್ರಕಾಶ್ ಬೆಳವಾಡಿ) ಎಂಬ ಲಿಕ್ಕರ್ ದೊರೆಗೆ ಕೆಲಸ ಮಾಡುವ ವಿಜಯ್, ಆಕಸ್ಮಿಕವಾಗಿ ಪ್ರಿಯಾ (ಸಂಚಿತಾ ಶೆಟ್ಟಿ) ಎಂಬ ಹುಡುಗಿಯನ್ನು ನೋಡಿ ಆಕರ್ಷಿತನಾಗುತ್ತಾನೆ. ಇನ್ನೇನು ಅವರಿಬ್ಬರೂ ಫ್ರೆಂಡ್ಸ್ ಆಗಿ ಮದುವೆ ಆಗಬೇಕು ಎನ್ನುವಷ್ಟರಲ್ಲಿ, ರಾಜ್ಯದ ಗೃಹ ಮಂತ್ರಿ ಕಿಂಗ್ (ಅಚ್ಯುತ್ ಕುಮಾರ್), ಆಕೆಯನ್ನು ಮದುವೆಯಾಗುವುದಕ್ಕೆ ಮುಂದಾಗುತ್ತಾನೆ. ಒಂದು ನಿರ್ಧಿಷ್ಟ ಗೋತ್ರ ಮತ್ತು ನಕ್ಷತ್ರದ ಹುಡುಗಿಯನ್ನು ಕಿಂಗ್ ಮದುವೆಯಾದರೆ, ಆತ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ ಎಂದು ಒಬ್ಬ ಜ್ಯೋತಿಷಿ ಭವಿಷ್ಯ ನುಡಿದ ಕಾರಣ ಕಿಂಗ್, ಮದುವೆಯಾಗುವುದಕ್ಕೆ ತೀರ್ಮಾನಿಸುತ್ತಾನೆ. ಇದನ್ನು ತಪ್ಪಿಸುವುದಕ್ಕೆ ಹೋಗುವ ವಿಜಯ್‍ಗೆ, ಕಿಂಗ್ ಹಲವು ತಂತ್ರಗಳನ್ನು ರೂಪಿಸುತ್ತಾನೆ.…

Rating

Our Rating

User Rating: Be the first one !

Check Also

Dodmane Hudge Movie Review

Review : Dodmane Hudga

The most expected film of Puneeth Rajkumar is here and there is no doubt that …