Breaking News
Home / News / Movie News / 17 ವರ್ಷಗಳ ನಂತರ ಮತ್ತೆ ಒಂದಾದ ಜೋಡಿ: ಪಂಚೆ ಧರಿಸಿ ಉಪೇಂದ್ರ- ಪ್ರೇಮಾ ಮೋಡಿ

17 ವರ್ಷಗಳ ನಂತರ ಮತ್ತೆ ಒಂದಾದ ಜೋಡಿ: ಪಂಚೆ ಧರಿಸಿ ಉಪೇಂದ್ರ- ಪ್ರೇಮಾ ಮೋಡಿ

17 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಪ್ರೇಮಾ ಮತ್ತೆ ಒಂದಾಗಿ ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮಾ ಎಂಬ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದಾರೆ.ಈ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಪೊಸ್ಟ್ ಪ್ರೊಡಕ್ಷನ್ ಮಾತ್ರ ಬಾಕಿ ಉಳಿದಿದೆ.ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ಪೊಸ್ಟರ್ ಬಿಡುಗಡೆಯಾಗಿದ್ದು, ಪ್ರೇಮಾ ಮತ್ತು ಉಪೇಂದ್ರ ಇಬ್ಬರು ಪಂಚೆ ಧರಿಸಿದ್ದಾರೆ. 1999ರಲ್ಲಿ ಬಿಡುಗಡೆಯಾಗಿದ್ದ ಉಪೇಂದ್ರ ಸಿನಿಮಾದಲ್ಲಿ ಪ್ರೇಮಾ ಮತ್ತು ಉಪೇಂದ್ರ ನಟಿಸಿದ್ದರು.ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದ ಮತ್ತೊಂದು ವಿಶೇಷತೆಯೆಂದರೆ H2o ಸಿನಿಮಾ ನಿರ್ದೇಶಕ ಲೋಕನಾಥ್ ಮತ್ತು ಉಪೇಂದ್ರ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದಾರೆ.ಉಪೇಂದ್ರ ಮತ್ತೆ ಹುಟ್ಟಿ ಸಿನಿಮಾದಲ್ಲಿ ನಟ ಉಪೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ, ಶೃತಿ ಹರಿಹರನ್ ಹಾಗೂ ಹರ್ಷಿಕೂ ಪೂಣಚ್ಚ ಚಿತ್ರದಲ್ಲಿ ನಟಿಸಿದ್ದಾರೆ.

uppi-new

Source: kannadaprabha

Check Also

varalaxmi

ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ, ನನಗೂ ಅಂತಹ ಸಂದರ್ಭ ಎದುರಾಗಿತ್ತು: ನಟಿ ವರಲಕ್ಷ್ಮಿ

ಮಲಯಾಳಂ ನಟಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಇದೀಗ ತಮಿಳುನಟಿ ವರಲಕ್ಷ್ಮಿ ಪ್ರಮುಖ ಟಿವಿ ಚಾನೆಲ್ ಒಂದರ ಮುಖ್ಯಸ್ಥರು …