Home / News / Featured News / ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದ ಸುದೀಪ್-ಪ್ರಿಯಾ

ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದ ಸುದೀಪ್-ಪ್ರಿಯಾ

ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಆದರೆ ಈಗ ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ದಂಪತಿಗಳು. ತಮ್ಮ ಮಗಳು ಸಾನ್ವಿ ಭವಿಷ್ಯಕ್ಕಾಗಿ ಒಟ್ಟಾಗಿ ಇರಲು ತೀರ್ಮಾನಿಸಿದ್ದಾರೆ ಎನ್ನುತ್ತವೆ ಮೂಲಗಳು.

1484024984-3302

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಕಾರಣ ಇಬ್ಬರೂ ಕೌಟುಂಬಿಕ ನ್ಯಾಯಲಯಕ್ಕೆ ಹಾಜರಾಗಬೇಕಿತ್ತು. ಆದರೆ ಕೋರ್ಟ್‍ಗೆ ಗೈರಾಗಿದ್ದು, ತಮ್ಮ ವಕೀಲರ ಮೂಲಕ ಅಫಿಡವಿಟ್ ಸಲ್ಲಿಸಿದ್ದಾರೆ. ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.
ಎರಡು ತಿಂಗಳ ಬಳಿಕ ಮತ್ತೆ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. ಆಗಲೂ ಅವರ ನಿರ್ಧಾರ ಇದೇ ರೀತಿ ಇದ್ದರೆ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ರದ್ದುಗೊಳಿಸಲಿದೆ. ಮಾರ್ಚ್ 9ಕ್ಕೆ ಸುದೀಪ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಕೇರಳ ಮೂಲದ ಪ್ರಿಯಾ ರಾಧಾಕೃಷ್ಣನ್ ಅವರನ್ನು 2001ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು ಸುದೀಪ್.
Source: webdunia

Check Also

dap48ydw0aaw0oj

ಆಹಾ..! ರಾಗಿಣಿ-ಆದಿ ಮದುವೆ ಆದ್ರಂತೆ…!?

ಚಿತ್ರರಂಗದಲ್ಲಿ ನಟೀಮಣಿಯರು ಏನೇ ಕಾರ್ಯ ಮಾಡಿದರೂ ಅದು ಸುದ್ದಿಯೇ. ಅದು ಜನ್ಮದಿನವಿರಲಿ, ಮದುವೆ ಸಮಾರಂಭವಾಗಲಿ, ಇನ್ಯಾವುದೇ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡರೂ …