Home / News / Featured News / ಬಹುನಿರೀಕ್ಷೆಯ ’ಚೌಕ’ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆ

ಬಹುನಿರೀಕ್ಷೆಯ ’ಚೌಕ’ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆ

’ಚೌಕ’ ಚಿತ್ರದ ಹಾಡು ಈಗಾಗಲೆ ಸಾಕಷ್ಟು ಜನಪ್ರಿಯವಾಗಿದೆ. ಇದೀಗ ಚಿತ್ರತಂಡ ಟ್ರೇಲರನ್ನು ಬಿಡುಗಡೆ ಮಾಡಲು ಮುಂದಾಗಿದ್ದು ಇದೇ ವಾರದಲ್ಲಿ ರಿಲೀಸ್ ಆಗಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರೇಕ್ಷಕರಿಗೆ ಟ್ರೇಲರ್ ತೋರಿಸಬೇಕು ಎಂಬುದು ಚಿತ್ರತಂಡದ ಒತ್ತಾಸೆ.
 1484025669-6715
ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಅವರ ಪುತ್ರ ಯೋಗಿಶ್ ನಿರ್ಮಿಸುತ್ತಿರುವ ಚಿತ್ರ ಇದು. ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ ಇದು. ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಿಯಾಮಣಿ, ಐಂದ್ರಿತಾ ರೇ, ದೀಪಾ ಸನ್ನಿಧಿ ಮುಂತಾದ ತಾರಾಬಳ ಇರುವಂತ ಮಲ್ಟಿಸ್ಟಾರ್ ಸಿನಿಮಾ.
ವಿಶೇಷ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸಿದ್ದಾರೆ. ಈ ಚಿತ್ರದ ಮೂಲಕ ತರುಣ್ ಸುಧೀರ್ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಅಡಿಯಿಡುತ್ತಿದ್ದಾರೆ. ಈಗಾಗಲೆ ಫಸ್ಟ್‌ಲುಕ್ ರಿಲೀಸ್ ಆಗಿದ್ದು, ಎಲ್ಲರ ಗಮನಸೆಳೆದಿದೆ.
Source: kannada

About sandalwood

Check Also

news1503338243

ಇಂದ್ರಜಿತ್ ಲಂಕೇಶ ಮಡದಿ ಅರ್ಪಿತಾ ಈಗ ನಟಿ ..!

ನಿರ್ದೇಶಕ ಇಂದ್ರಜಿತ್ ಲಂಕೇಶ ಅವರ ಮಡದಿ ಅರ್ಪಿತಾ ನಟಿಯಾಗಿದ್ದಾರೆ. ಸಮ್ಮರ್ ಹಾಲಿಡೇಸ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಆ ಮೂಲಕ ಅವರು …