Home / News / Celebrity News / ಜಯಾ ಇಚ್ಛೆಯಂತೆ ಅಮ್ಮನಾಗಾತ್ತಾರಾ ಐಶ್

ಜಯಾ ಇಚ್ಛೆಯಂತೆ ಅಮ್ಮನಾಗಾತ್ತಾರಾ ಐಶ್

ಹೃದಯಾಘಾತದಿಂದ ಇತ್ತೀಚಿಗಷ್ಟೇ ಅಪಾರ ಅಭಿಮಾನಿಗಳನ್ನಗಲಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಜೆ. ಜಯಲಲಿತಾ ಅವರ ಸಿನಿಮಾ ತೆರೆಯ ಮೇಲೆ ಮೂಡಿಬರಲಿದೆ ಎಂದ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿಯೇ ಥ್ರಿಲ್ ಆಗಿರುವ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ಅಮ್ಮನನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದಾರೆ. 

1484104687-6467

ಮತ್ತೀಗ ಎದುರಾಗಿರೋ ಪ್ರಶ್ನೆ, ಅಮ್ಮನ ಸ್ಥಾನಕ್ಕೆ ಯಾರು ಸೂಕ್ತರು ಎಂಬ ಬಗ್ಗೆ. ಆದರೆ ನಟಿ ಪರಿವರ್ತಿತ ರಾಜಕಾರಣಿ ಜಯಲಲಿತಾ ಅವರು 1999ರಲ್ಲಿ ಬಾಲಿವುಡ್‌ನ ಪ್ರಸಿದ್ಧ ಟಿವಿ ನಿರೂಪಕಿ ಸಿಮಿ ಗರೆವಾಲ್‌ ಅವರು ನಡೆಸಿದ ಸಂದರ್ಶನದಲ್ಲಿ ಜಯಲಲಿತಾ ತಮ್ಮ ಜೀವನಗಾಥೆ ಸಿನಿಮಾ ಆಗುವುದಾದರೆ. ನನ್ನ ಪಾತ್ರಕ್ಕೆ ಐಶ್ವರ್ಯ ರೈ ಸೂಕ್ತ ಎಂದಿದ್ದರು. “ನನ್ನ ಯೌವ್ವನದ ಪಾತ್ರಕ್ಕೆ ಜೀವ ತುಂಬಲು ಐಶ್ವರ್ಯ ರೈ ಸೂಕ್ತ ಎಂದೆನಿಸುತ್ತದೆ. ಆದರೆ ನನ್ನ ಯೌವ್ವನದ ನಂತರದ ಪಾತ್ರಕ್ಕೆ ಆಯ್ಕೆ ಕಷ್ಟವಾಗಬಹುದು ಎಂದಿದ್ದರು.
ಮಣಿರತ್ನಂ ಅವರ ‘ಇರುವರ್‌’ ಸಿನಿಮಾದಲ್ಲಿ ಜಯಾರ ಪಾತ್ರದಲ್ಲಿ ಕಾಣಿಸಿಕೊಂದಿದ್ದ ಐಶ್, ಜಯಾ ಅವರ ಇಚ್ಛೆಯಂತೆ ಮತ್ತೆ ‘ಅಮ್ಮನಾಗ್ತಾರೆ’ ಎಂಬುದನ್ನು ಕಾದು ನೋಡಬೇಕಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
Source: kannada

Check Also

news1490153349

ಏಪ್ರಿಲ್ ತಿಂಗಳಲ್ಲಿ ‘ಹ್ಯಾಪಿ ನ್ಯೂ ಈಯರ್’ ಹೊಸ ಪರ್ವ ಕಾಲ

ಬಿಸಿ ಪಾಟೀಲ್ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳ ಸರದಾರ. ರಾಜಕಾರಣದ ಜೊತೆಯಲ್ಲೇ ಚಿತ್ರೋದ್ಯಮದಲ್ಲೂ ಸಕ್ರಿಯರಾಗಿದ್ದ ಪ್ರತಿಭೆ. ಆದರೆ ಇತ್ತೀಚಿನ …