Breaking News
Home / News / Celebrity News / ಕನ್ನಡ ಸಿನಿಮಾ ರಂಗಕ್ಕೆ ಸಿಕ್ಕ ಹ್ಯಾಂಡ್ ಸಮ್ ವಿಲನ್- ತಾರಕ್ ಪೊನ್ನಪ್ಪ

ಕನ್ನಡ ಸಿನಿಮಾ ರಂಗಕ್ಕೆ ಸಿಕ್ಕ ಹ್ಯಾಂಡ್ ಸಮ್ ವಿಲನ್- ತಾರಕ್ ಪೊನ್ನಪ್ಪ

ಚಿತ್ರಗಳಲ್ಲಿ ಖಳ ನಾಯಕರಿಲ್ಲದೇ ಸಿನಿಮಾ ಪೂರ್ಣವೆನಿಸುವುದಿಲ್ಲ ಎಂಬಾಂತಾಗಿದೆ. ಹೀಗಾಗಿ  ಇತ್ತೀಚೆಗೆ ಚಿತ್ರ ನಿರ್ದೇಶಕರು ವಿಲನ್ ಗಳ ಆಯ್ಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.ಖಳನಾಯಕರ ವೇಷ, ಖಡಕ್ ಸಂಭಾಷಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಿನಿಮಾ ನಿರ್ಮಾಪಕರು ಹ್ಯಾಂಡ್ ಸಮ್ ವಿಲನ್ ಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ಯಾಂಡಲ್ ವುಡ್ ಗೂ ಒಬ್ಬ ಹ್ಯಾಂಡ್ ಸಮ್ ಖಳನಾಯಕ ಸಿಕ್ಕಿದ್ದಾನೆ, ಅದುವೇ ತಾರಕ್ ಪೊನ್ನಪ್ಪ.ಕೂರ್ಗ್ ನವರಾದ ತಾರಕ್ ಸ್ಟೈಲಿಶ್ ನಟ, ನಂದ ಕಿಶೋರ್ ನಿರ್ದೇಶನ ಮನೋರಂಜನ್ ನಾಯಕನಟನಾಗಿ ಅಭಿನಯಿಸುತ್ತಿರುವ ತಮಿಳಿನ ವಿಐಪಿ ಚಿತ್ರದ ಕನ್ನಡ ರಿಮೇಕ್  ಸಿನಿಮಾದಲ್ಲಿ ತಾರಕ್ ಅಭಿನಯಿಸುತ್ತಿದ್ದಾರೆ.6 ಅಡಿ 2 ಇಂಚು ಎತ್ತರವಿರುವ ತಾರಕ್ ಎರಡನೇ ಆವೃತ್ತಿಯ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚೆನ್ನಾಗಿರುವ ವಿಲನ್ ಗಳು ಸಿನಿಮಾದಲ್ಲಿ ಇರುವುದು ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ಆಗಿದೆ. ಈ ಸಿನಿಮಾದಲ್ಲಿ ನಾನು ಅಭಿನಯಿಸುತ್ತಿರುವು ತುಂಬಾ ಸಂತಸ ತಂದಿದೆ ಎಂದು ಮಾಡೆಲ್ ಕೂಡ ಆಗಿರುವ ನಟ ಕಾರಕ್ ಅಭಿಪ್ರಾಯ ಪಟ್ಟಿದ್ದಾರೆ.ಸೋನು ಸೂದ್ ನನ್ನ ರೋಲ್ ಮಾಡೆಲ್, ಅವರಂತೆ ಕನ್ನಡ ಸಿನಿಮಾ ರಂಗದಲ್ಲಿ ನನ್ನದೇ ಆದ ಛಾಪು ಮೂಡಿಸಬೇಕು ಎಂಬುದು ಎಂ.ಟೆಕ್ ಮುಗಿಸಿರುವ 25 ವರ್ಷದ ತಾರಕ್ ಪೊನ್ನಪ್ಪ ಕನಸಾಗಿದೆ.ಸಿನಿಮಾ ರಂಗಕ್ಕೆ ಖಳನಾಯಕನಾಗಿ ಪಾದಾರ್ಪಣೆ ಮಾಡುವ ಮುನ್ನ ನಟನಾ ತರಬೇತಿ ಪಡೆದುಕೊಂಡಿರುವ ತಾರಕ್ ಕಲಾವಿದನಾಗಬೇಕು ಎಂಬುದು ನನ್ನ ಫ್ಯಾಶನ್ ಎಂದು ಹೇಳಿದ್ದಾರೆ. ಅದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ನಾಲ್ಕು ವರ್ಶಗಳ ಕಾಲ ಮಾಡೆಲಿಂಗ್ ನಲ್ಲಿಯೂ ಕೂಡ ತಾರಕ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನ ನಾನು ಫಿಟ್ ಆಗಿರಬೇಕು ಎಂಬುದು ನನ್ನ ಇಚ್ಚೆಯಾಗಿತ್ತು. ನಂದ ಕಿಶೋರ್ ಅವರ ಸಿನಿಮಾದಲ್ಲಿ ಅಭಿನಯ ಆರಂಭಿಸುವ ಮೂಲಕ ನನ್ನ ಕನಸು ನನಸಾಗುತ್ತಿದೆ. ನಾವು ಒಳ್ಳೆಯವರಾಗಿದ್ದರೇ, ನಡೆಯುವ ಪ್ರತಿಯೊಂದು ವಿಷಯಗಳು ಕೂಡ ಒಳ್ಳೆಯದಾಗಿರುತ್ತದೆ, ಎಲ್ಲವು ನಮ್ಮ ಮಡಿಲಿಗೆ ಬಂದು ಬೀಳುತ್ತವೆ. ನಾನು ಸಿನಿಮಾರಂಗದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ತಾರಕ್ ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.

tarak-new

Source: kannadaprabha

About sandalwood

Check Also

varalaxmi

ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ, ನನಗೂ ಅಂತಹ ಸಂದರ್ಭ ಎದುರಾಗಿತ್ತು: ನಟಿ ವರಲಕ್ಷ್ಮಿ

ಮಲಯಾಳಂ ನಟಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಇದೀಗ ತಮಿಳುನಟಿ ವರಲಕ್ಷ್ಮಿ ಪ್ರಮುಖ ಟಿವಿ ಚಾನೆಲ್ ಒಂದರ ಮುಖ್ಯಸ್ಥರು …

4 comments

  1. Loshik Ponnappa c dats ur bro ryt???